ನಂದಿನಿ ಘೋಸಲ್ ಭಾರತೀಯ ಬಂಗಾಳಿ ಶಾಸ್ತ್ರೀಯ ನೃತ್ಯಗಾರ್ತಿ, ನೃತ್ಯ ಸಂಯೋಜಕಿ ಹಾಗೂ ನಟಿ. ೧೯೯೭ರ ನಾಟಕ ಚಲನಚಿತ್ರವಾದ ಚಾರ್ ಅಧ್ಯಾಯ್‌ ನಲ್ಲಿ ತಮ್ಮ ನಟನೆಯನ್ನು ಆರಂಭಿಸಿದರು. ನಂತರ ನಂದಿನಿ ಹಲವಾರು ಬಂಗಾಳಿ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಉದಾಹರಣೆಗೆ ಕಿಚ್ಚು ಸನ್ಲಪ್ ಕಿಚ್ಚು ಪ್ರಲಾಪ್ (೧೯೯೯) ಮತ್ತು ಮಲಯಾಳಂ ಚಲನಚಿತ್ರ ಸ್ಥಿತಿ (೨೦೦೩). == ಕೆಲಸ == ಶಾಸ್ತ್ರೀಯ ನೃತ್ಯಗಾರ್ತಿಯಾದ ಅವರು ಗುರು ಪೌಶಾಲಿ ಮುಖರ್ಜಿ ಅವರ ಬಳಿ ಒಡಿಸ್ಸಿಯನ್ನು ಕಲಿಯುತ್ತಾರೆ. ಮೇಷ್ಟ್ರು ಗುರು ಕೇಳುಚರಣ್ ಮಹಾಪಾತ್ರ ಅವರ ಮಾರ್ಗದರ್ಶನದಲ್ಲಿ ಪಾಠವನ್ನು ತೆಗೆದುಕೊಂಡ ನಂತರ ಅವರು ಗುರು ಮಹಾಪಾತ್ರರಿಂದ ನೃತ್ಯ ಸಂಯೋಜನೆಯ ಹಲವಾರು ನೃತ್ಯ-ನಾಟಕಗಳಲ್ಲಿ ಕೇಂದ್ರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಸ್ಪೇನ್‌ನ ವೇಲೆನ್ಸಿಯನ್ ಸರ್ಕಾರದ ವತಿಯಿಂದ ಯುನೆಸ್ಕೋ ಪ್ರಾಯೋಜಿತ ಸಂಸ್ಥೆಯಾದ ವರ್ಲ್ಡ್ ಆರ್ಟ್ಸ್ ಕೌನ್ಸಿಲ್‌ನ ಸದಸ್ಯರಾಗಿದ್ದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ನಂದಿನಿ ಘೋಸಲ್ ಐ ಎಮ್ ಡಿ ಬಿನಲ್ಲಿ